March 5, 2024

Basavaraja Dadesuguru nomination form among millions of people

ಲಕ್ಷಾಂತರ ಜನರಿಂದ ಶಾಸಕರಿಗೆ ಬೆಂಬಲ

ಕನಕಗಿರಿಯ ಶಾಸಕರಾದ ಮಾನ್ಯ ಶ್ರೀ ಬಸವರಾಜ ದಡೇಸೂಗುರು ಅವರು ನಾಮಪತ್ರ ಸಲ್ಲಿಸುವ ವೇಳೆ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಸಂಗಣ್ಣ ಕರಡಿಯವರು ಜೊತೆಗೆ ಲಕ್ಷಾಂತರ ಶಾಸಕರ ಅಭಿಮಾನಿಗಳು ಆಗಮಿಸಿ ಹಾಡುತ್ತಾ ,ಕುಣಿಯುತ್ತಾ ಕೇಕೆ ಹೊಡೆಯುತ್ತಾ ಶಾಸಕರಿಗೆ ಆತ್ಮಸ್ಥೈರ್ಯವನ್ನು ತುಂಬಿದರು.ಜನಸಂದಣಿ ಎಷ್ಟಿತ್ತೆಂದರೆ ಕನಕಗಿರಿ ತುಂಬೆಲ್ಲ ಎಲ್ಲಿ ನೋಡಿದರು ಅಭಿಮಾನಿಗಳು ,ಕೇಸರಿ ದ್ವಜ.

ಇಂದು ಕನಕಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ದಡೇಸೂಗೂರು ಅವರು ಐವತ್ತು ಸಾವಿರಕ್ಕೂ ಹೆಚ್ವು ಅಪಾರ ಅಭಿಮಾನಿಗಳು, ಬೆಂಬಲಿಗರೊಂದಿಗೆ ಭರ್ಜರಿ ಮೆರವಣಿಗೆ ಮುಖಾಂತರ ಪಕ್ಷದ ಹಿರಿಯರೊಂದಿಗೆ ಕುಟುಂಬ ಸಮೇತ ನಾಮಪತ್ರ ಸಲ್ಲಿಸಿದರು..

ಈ ವೇಳೆ ಕನಕಗಿರಿ ನಗರದ ಪ್ರಮುಖ ಬೀದಿಗಳಲ್ಲಿ ಭರ್ಜರಿ ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಚುನಾವಣೆ ಅಧಿಕಾರಿಗಳ ಕಚೇರಿಯವರೆಗೆ ನಡೆಯಿತು… ಈ ಸಂಧರ್ಭದಲ್ಲಿ ಜಿಲ್ಲಾ ನಾಯಕರು,ಮಂಡಲದ ಪ್ರಮುಖರು, ಪಕ್ಷದ ಪಧಾದಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಅಭಿಮಾನಿಗಳು ಉಪಸ್ಥಿತರಿದ್ದರು…

ರಾಜಕೀಯ ಪ್ರಚಾರದ ಸಮಯದಲ್ಲಿ ಇದು ಅಸಾಮಾನ್ಯ ವಿದ್ಯಮಾನವಲ್ಲ, ಏಕೆಂದರೆ ರಾಜಕೀಯ ಪಕ್ಷಗಳ ಬೆಂಬಲಿಗರು ಹೆಚ್ಚಾಗಿ ತಮ್ಮ ಆಯ್ಕೆಯಾದ ಅಭ್ಯರ್ಥಿಗಳಿಗೆ ತಮ್ಮ ಬೆಂಬಲವನ್ನು ತೋರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಾಸಕರ ಜೊತೆ ಸೇರುವುದನ್ನು ಒಗ್ಗಟ್ಟು ಪ್ರದರ್ಶಿಸುವ ಮತ್ತು ಸ್ಥಳೀಯ ಸಮುದಾಯದಲ್ಲಿ ಅಭ್ಯರ್ಥಿಯ ಜನಪ್ರಿಯತೆ ಮತ್ತು ಬೆಂಬಲವನ್ನು ಪ್ರದರ್ಶಿಸುವ ಮಾರ್ಗವಾಗಿ ಕಾಣಬಹುದು

ನಾಮಪತ್ರ ಸಲ್ಲಿಕೆ ಸಮಯದಲ್ಲಿ ಅಭ್ಯರ್ಥಿಯನ್ನು ಸೇರುವ ಜನರ ಸಂಖ್ಯೆಯು ಚುನಾವಣೆಯ ಅಂತಿಮ ಫಲಿತಾಂಶವನ್ನು ಪ್ರತಿಬಿಂಬಿಸುವುದಿಲ್ಲ ಎಂಬ ಮಾತಿದ್ದರೂ ಅದು ಇಂದು ಸುಳ್ಳಾಗುವುದು ಏಕೆಂದರೆ ಇವತ್ತು ಆಗಮಿಸಿದ ಜನ ಶಾಸಕರ ಪ್ರೀತಿ ಹಾಗೂ ಗೌರವ ಮೇಲೆ ಚುನಾವಣೆಯ ಫಲಿತಾಂಶಗಳು ಅಭ್ಯರ್ಥಿಯ ವೇದಿಕೆ, ಅವರ ಪ್ರಚಾರ ಕಾರ್ಯತಂತ್ರ, ರಾಜಕೀಯ ವಾತಾವರಣ ಮತ್ತು ಮತದಾರರ ಮತದಾನದ ಪ್ರಮಾಣ ಸೇರಿದಂತೆ ವಿವಿಧ ಅಂಶಗಳ ಇಲ್ಲಿ ಕೆಲಸ ಮಾಡುತ್ತದೆ .

Leave a Reply

Your email address will not be published. Required fields are marked *