March 5, 2024

Gentleman politician Basavaraja Dadesuguru

ಸಂಭಾವಿತ ರಾಜಕಾರಣಿ ನಮ್ಮ ಬಸವರಾಜ ದಡೇಸೂಗುರು

ಈ ಜಗತ್ತಿನಲ್ಲಿ ದುಷ್ಟ ಜನರಿಗೆ ಸಿಗುವ ಮರ್ಯಾದೆ ಸಂಭಾವಿತರಿಗೆ ಸಿಗದಿರುವುದು ವಿಪರ್ಯಾಸ .ಮೊದ ಮೊದಲು ಕೆಟ್ಟವರೆ ಗೆದ್ದಂತೆ ತೋರಿದರೂ,ಅನ್ಯಾಯವೇ ಕೇಕೆ ಹಾಕಿದಂತೆ ಗೋಚರಿಸಿದರೂ,ಕೊನೆಗೆ ವಿಜಯ ಸಾಧಿಸುವುದು ನ್ಯಾಯ.ಕ್ರೂರ ವ್ಯಕ್ತಿಗಳ ಮುಖವಾಡ ಕಳಚಿ ಸಂಭಾವಿತರ ಸತ್ಯ ದರ್ಶನವಾಗಿ ದುಷ್ಟರು ಮೂಲೆಗುಂಪಾಗಿ ಶಿಷ್ಟರು ವಿಜ್ರಂಭಿಸುತ್ತಾರೆ.


ಈ ಮೇಲಿನ ಹೇಳಿಕೆ ಅನ್ವಯಿಸುವುದು ನಮ್ಮ ಕನಕಗಿರಿ ಮತಕ್ಷೇತ್ರದ ಜನಪ್ರಿಯ ಸಂಭಾವಿತ ಶಾಸಕರಾದ ಶ್ರೀ ಬಸವರಾಜ ದಡೇಸೂಗುರು.ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದವರ ಮುಖವಾಡ ಕಳಚಿ ವೈರಿಗಳ ಸತ್ಯ ದರ್ಶನವಾಗುವ ಕಾಲ ಸಮೀಪಿಸುತ್ತಿದೆ.
ಇವರ ನಿಂದಿಸಲು ಕಾರಣ ಇದೆಯೇ?ಇವರು ತಾವಾಯಿತು ತಮ್ಮ ಕ್ಷೇತ್ರದ ಕೆಲಸವಾಯಿತು ಅಂತ ಜೀವನ ಸಾಗಿಸುತ್ತಿದ್ದರಲ್ಲ ಅದೇ ಕಾರಣನಾ?ಕ್ಷೇತ್ರದ ಪ್ರತಿಯೊಬ್ಬ ಪ್ರಜೆ ನಮ್ಮ ಸಹೋದರ ಸಹೋದರಿ ಎಂಬ ಭಾವನೆಯಲ್ಲಿ ಎಲ್ಲರ ಜೊತೆ ತಾವು ಶಾಸಕರು ಎಂಬ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬೆರೆಯುತ್ತಿದ್ದರಲ್ಲ ಅದೇ ಕಾರಣನಾ?ವೈರಿಗಳ ಮಾತಿಗೆ ಕಿವಿಗೊಡದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ತರಲು ಊಟ ನಿದ್ರೆ ನೀರಡಿಕೆ ಮರೆತು ಶ್ರಮಿಸುತ್ತಿದ್ದರಲ್ಲ ಅದು ಪ್ರಮುಖ ಕಾರಣವಾಯಿತೇ ?ಇವರ ಉದಾತ್ತವಾದ ಮನಸ್ಸು ಹಾಗೂ ಉನ್ನತವಾದ ಸಾಮಾಜಿಕ ಸ್ಥಾನಮಾನ ಹೊಂದಿರುವುದಕ್ಕೆ ಕಾರಣವಾಯಿತೇ?‌ ಅಥವಾ ಶಾಸಕರು ರಾಜಕೀಯವಾಗಿ ಇನ್ನೂ ಉನ್ನತ ಹುದ್ದೆಗೆ ಈ ಏರುತ್ತಾರೋ ಅನ್ನುವ ಕಾರಣವಾ?ಅಥವಾ ದಿನದಿಂದ ದಿನಕ್ಕೆ ಇವರ ಜನಪ್ರಿಯತೆ ಗಗನಚುಂಬಿಯಾಗುತ್ತಿರುವ ಕಾರಣವಾ?
ಹೇಳಿ ಮಹಾನುಭಾವರೆ ನಮ್ಮ ಶಾಸಕರು ಮಾಡಿದ ಅಂತಹ ಅಕ್ಷಮ್ಯ ಅಪರಾಧವಾದರೂ ಏನು?

ಇವತ್ತು ಕೊಪ್ಪಳ ಜಿಲ್ಲೆಯಲ್ಲಿ ಸುಸಂಸ್ಕೃತ ,ಸಂಭಾವಿತ ,ಪ್ರತಿಸ್ಪರ್ಧಿಯನ್ನು ನಿಂದಿಸದ ರಾಜಕಾರಣಿ ಯಾರಾದರೂ ಇದ್ದರೆ ಅದು ಕನಕಗಿರಿ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ದಡೇಸೂಗುರು .ಅವರು ಮಾತನಾಡುವುದು ಕಡಿಮೆಯಾದರೂ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ.ಅವರ ಮತಕ್ಷೇತ್ರದ ಪ್ರತಿಗಾಮಕ್ಕೆ ಕಾಲಿಟ್ಟಾಗ ತಿಳಿಯುತ್ತದೆ ಅವರು ಮಾಡಿದ ಕೆಲಸ .ಪ್ರತಿಗಾಮದಲ್ಲಿ ಸುಸಜ್ಜಿತವಾದ ಸಿ.ಸಿ ರಸ್ತೆಗಳು ಇದ್ದರೆ ಅದು ಇವರ ಕಾಲದಲ್ಲಾದ್ಧದ್ದು ಅಂತ.ಅವರು ಎಂದೂ ಮಾಧ್ಯಮದವರ ಮುಂದೆ ಬಂದು ನಿಲ್ಲುವವರಲ್ಲ.ಎಂದಿಗೂ ಪ್ರಚಾರದ ಗೀಳಿಗೆ ಹೋದವರಲ್ಲ.ಆದರೆ ತಮ್ಮ ಕರ್ತವ್ಯ ಪಾಲನೆಗೆ ಎಂದೂ ಮೋಸ ಮಾಡಿಲ್ಲ .ತಾವಾಯಿತು ತಮ್ಮ ಕೆಲಸವಾಯಿತು ಅನ್ನುವುದರಲ್ಲೆ ಹೆಚ್ಚು ಸಂತೃಪ್ತರು.”ಕಾಯಕ ಕೈಲಾಸ” ಎಂಬ ಗಾದೆ ಮಾತಿನ ಮೇಲೆ ವಿಶ್ವಾಸ ಉಳ್ಳವರು
ತಮ್ಮ ಮತಕ್ಷೇತ್ರದ ಅಂಗವಿಕಲರ ನೋವನ್ನು ಮನಗಂಡು ಪ್ರತಿ ಅಂಗವಿಕಲನಿಗೆ ನಾಲ್ಕು ಚಕ್ರದ ಬೈಕ್ ನೀಡಿದ್ದಾರೆ .ಸರಕಾರಿ ನೌಕರರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದರೆ ಅದಕ್ಕೆ ಕಾರಣ ಶಾಸಕರಾದ ಬಸವರಾಜರವರು .ಕೊರೋನಾ ಸಂದರ್ಭದಲ್ಲಿ ಪ್ರತಿ ಗ್ರಾಮಕ್ಕೆ ತೆರಳಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ನ್ನು ತಮ್ಮ ಖರ್ಚಿನಲ್ಲಿಯೇ ವಿತರಿಸಿದರು.ಕ್ಷೇತ್ರದ ಯಾರೇ ಬಂದು ತಮಗೆ ಶಾಸಕರ ಶಿಫಾರಸ್ಸು ಪತ್ರ ಬೇಕೆಂದು ಕೇಳಿಕೊಂಡರೆ ತಕ್ಷಣದಲ್ಲೇ ಅದನ್ನು ನೀಡುವ ಹವ್ಯಾಸ ಮಾಡಿಕೊಂಡಿದ್ದಾರೆ .ತಮ್ಮ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಲು ತಮ್ಮ ಸಮಯ ಮೀಸಲಿಟ್ಟಿದ್ದಾರೆ ಅಂದರೆ ತಪ್ಪಾಗಲಾರದು .

ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅವರ ನೋವನ್ನು ಅಂತಕರಣದಿಂದ ಅರ್ಥೈಸಿಕೊಳ್ಳುವ ಅವರ ಆರ್ಥಿಕ ವೈಕಲ್ಯಕ್ಕೆ ಊರುಗೋಲಾಗುವ ಸ್ವಾರ್ಥವನ್ನು ಬದಿಗಿಟ್ಟು ನಿಸ್ವಾರ್ಥ ಸೇವೆ ಗೈಯ್ಯುವ ಹಸಿದವನಿಗೆ ಒಂದು ತುತ್ತು ಅನ್ನ ಇಕ್ಕುವ ಸೂರಿಲ್ಲದವರಿಗೆ ನೆರಳಾಗಲು ನೆರವಾಗುವ ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡುವ ಒಬ್ಬ ನೈಜವಾದ ಜನನಾಯಕನಿಗೆ ಇರಬೇಕಾದ ಗುಣಗಳು

Leave a Reply

Your email address will not be published. Required fields are marked *