March 5, 2024

MLA’s popularity is skyrocketing

ಗಗನದೆತ್ತರಕ್ಕೆ ಏರುತ್ತಿದೆ ಶಾಸಕರ ಜನಪ್ರಿಯತೆ

ಇವತ್ತು ಒಬ್ಬ ವ್ಯಕ್ತಿಯನ್ನು ಎಷ್ಟು ತುಳಿಯಬೇಕು ಎಂದು ಹವಣಿಸುತ್ತೇವೆಯೋ ?ಯಾವ ಪ್ರಮಾಣದಲ್ಲಿ ಆ ವ್ಯಕ್ತಿಯ ಹೆಸರು ಹಾಳು ಮಾಡಬೇಕೆಂದು ತೆರೆಮರೆಯಲ್ಲಿ ಪ್ರಯತ್ನಿಸುತ್ತೇವೆಯೋ? ಜನರ ಮುಂದೆ ಇಲ್ಲ ಸಲ್ಲದ ವಿಷಯ ಮುಂದೇ ಮಾಡಿಕೊಂಡು ಅಪಪ್ರಚಾರ ಮಾಡುತ್ತಾ ಸಾಗುತ್ತಾರೋ?ಒಬ್ಬ ವ್ಯಕ್ತಿಯ ಜನಪ್ರಿಯತೆ ಕುಗ್ಗಿಸಲು ಶತಾಯಗತಾಯ ಪ್ರಯತ್ನಿಸುತ್ತಾರೋ? ಆ ವ್ಯಕ್ತಿಯ ಜನಪ್ರಿಯತೆ ಅಷ್ಟೇ ಪ್ರಮಾಣದಲ್ಲಿ ಏರುತ್ತಾ ಸಾಗುತ್ತದೆ

ಇದಕ್ಕೆ ಒಂದು ಉತ್ತಮ ಉದಾಹರಣೆ ಅಂದರೆ ನಮ್ಮ ಶಾಸಕರಾದ ಶ್ರೀ ಬಸವರಾಜ ದಡೇಸೂಗುರು ಅವರು.ಇವರನ್ನು ತುಳಿಯಬೇಕೆಂಬ ತುಡಿತದಲ್ಲಿದ್ದವರು, ಕ್ಷುಲ್ಲಕ ವಿಚಾರ ಇಟ್ಟುಕಂಡು ಇಲ್ಲ ಸಲ್ಲದ ವಿಷಯವನ್ನು ಜನರ ಮುಂದೆ ಹೇಳುತ್ತಾ ತಿರುಗಿದವರ ಆಸೆ ನಿರಾಸೆಯಾಗಿದೆ.ಇವರ ಮಾನಸಿಕ ಸ್ಥೈರ್ಯವನ್ಜು ಕುಗ್ಗಿಸಬೇಕೆಂದು ಹವಣಿಸಿದವರು ಇಂದು ಅವರೆ ಕುಗ್ಗಿ ಹೋಗುವ ಹಾಗಾಗಿದೆ.ಇವರ ಜನಪ್ರಿಯತೆ ಹಾಳುಮಾಡಿಬಿಡಬೇಕು ಅಂದು ಮಾಡಬಾರದ ಕೆಲಸ ಮಾಡಿದವರ ಬಾಯಿಗೆ ಬೀಗ ಬಿದ್ದಿದೆ .ಶಾಸಕರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಾ ಏರುತ್ತಾ ಗಗನದೆತ್ತರಕ್ಕೆ ಸಾಗುತ್ತಿದೆ.

ಹೀಗೆ ಹಿಂದೆ ಮೋದಿಯವರ ಮೇಲೆ ಇಲ್ಲ ಸಲ್ಲದ ಅಪವಾದ ಮಾಡಲು ಪ್ರಯತ್ನಿಸಿದ್ದರು ಚಾಯ್ ವಾಲಾ ಅಂತ ಜೆರೆದರು.ವಿರೋಧ ಪಕ್ಕದ ಕಾರ್ಯಕರ್ತನಿಂದ ಉನ್ನತ ನಾಯಕನವರಿಗೆ ಅವರನ್ನು ಎಲ್ಲರೂ ತೆಗಳಿದವರೆ.ಆದರೆ ಇವತ್ತು ಏನಾಗಿದೆ ಮೋದಿಯವರ ಬಗ್ಗೆ ಮಾತನಾಡಿದವರ ಬಾಯಿಗೆ ಬೀಗ ಬಿದ್ದಿದೆ.ಅವರನ್ನು ವಿಶ್ವದ ಜನತೆ ಕೊಂಡಾಡುತ್ತಿದೆ.ಅವರು ವಿಶ್ವ ನಾಯಕರಾಗಿ ಬೆಳೆದಿದ್ದಾರೆ.ಅವರನ್ನು ತೆಗಳಲು ಹಗಲು ರಾತ್ರಿ ದೀಪಹಾಕಿ ಹುಡುಕಿದರೂ ಯಾವುದೇ ವಿಷಯ ಸಿಗುತ್ತಿಲ್ಲ .ತೆಗಳಿದವರು ಹೇಳಲು ಹೆಸರಿಲ್ಲದಂತಾಗಿದ್ದಾರೆ.

ಇದೆ ಘಟನೆ (ಮೋದಿಯವರ ತರಹ) ನಮ್ಮ ಶಾಸಕರಾದ ಬಸವರಾಜ ದಡೇಸೂಗುರು ಅವರ ಬಾಳಲ್ಲಿ ಜರಗುವುದು ತುಂಬಾ ಹತ್ತಿರವಾಗುತ್ತಿದೆ.ಶಾಸಕರನ್ನು ಜರೆದವರು ತಮ್ಮ ಹೆಸರು ಇಲ್ಲದಂತಾಗುವುದು ಶತಶಿದ್ದ.ಶಾಸಕರು ಕಾಲಿಟ್ಟ ಪ್ರತಿ ಗ್ರಾಮದಲ್ಲಿ ಜನಜಾತ್ರೆ.ಜನವೋ ಜನ.ಕನಕಗಿರಿ ಮತಕ್ಷೇತ್ರದ ತುಂಬಾ ಇವರ ಹವಾ!!! ಬಿಟ್ಟರೆ ಬೇರೆಯವರ ಹವಾನೇ ಇಲ್ಲ .ಇವರ ಜನಪ್ರಿಯತೆ ದಿನದಿಂದ ದಿನಕ್ಕೆ ಸುಂಟರಗಾಳಿ ತರಹ ಬೀಸುತ್ತಿದೆ.ಈ ಮಾರುತವನ್ನು ನೋಡಿದರೆ 50 ಸಾವಿರ ಮತಗಳ ಅಂತರದಿಂದ ವಿಜಯಮಾಲೆ ಹಾಕಿಕೊಳ್ಳುವುದು ಖಂಡಿತ.

Leave a Reply

Your email address will not be published. Required fields are marked *