March 5, 2024

SSLC evaluation start from today.when result date

SSLC ಮೌಲ್ಯಮಾಪನ ಇಂದಿನಿಂದ ಆರಂಭ

ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್‌ ಅಂಡ್ ಅಸೆಸ್ಮೆಂಟ್ ಬೋರ್ಡ್‌ ಇಂದಿನಿಂದ (ಏಪ್ರಿಲ್ 24) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹಿಂದೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಏಪ್ರಿಲ್ 21 ರಂದೇ ಆರಂಭಿಸುವುದಾಗಿ ಮಂಡಲಿ ಹೇಳಿತ್ತು. ಆದರೆ ಕಾರಣಾಂತರಗಳಿಂದ ಏಪ್ರಿಲ್ 24 ರಿಂದ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭ ಮಾಡಿದೆ.

ಫಲಿತಾಂಶ ಯಾವಾಗ

2023ನೇ ಸಾಲಿನ ಕರ್ನಾಟಕ ಬೋರ್ಡ್‌ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮೇ ತಿಂಗಳ 2ನೇ ವಾರದಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದ್ವಿತೀಯ ಪಿಯುಸಿ ರಿಸಲ್ಟ್‌ ನೀಡಿದ ಮಾದರಿಯಲ್ಲೇ ನೀಡಲಾಗುವುದು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ’ಯು ಶಿಕ್ಷಕರಿಗೆ ಈಗಾಗಲೇ ಮೌಲ್ಯಮಾಪನಕ್ಕೆ ತಪ್ಪದೇ ಹಾಜರಾಗಲು ಸೂಚನೆ ನೀಡಿದೆ. ಮೇ ತಿಂಗಳಿನಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಫಲಿತಾಂಶ ಬಿಡುಗಡೆ ಮಾಡಲು ಮಂಡಲಿ ಕಾರ್ಯ ರೂಪಿಸಿದೆ.

Leave a Reply

Your email address will not be published. Required fields are marked *