March 5, 2024

THE MERCIFUL MAN IN CORONA

ಕೊರೋನಾದಲ್ಲೊಬ್ಬ ಕರುಣಾಮಯಿ

ಅದು 2021 ಮಾರ್ಚ್ ತಿಂಗಳಿನಿಂದ ಅಗಸ್ಟ್ ತಿಂಗಳು ಭಾರತ ದೇಶಕ್ಕಂತು ಅಷ್ಟು ಸಾವನ್ನು ಎಂದು ನೋಡಿರದ ಹಾಗೂ ಒಬ್ಬ ವ್ಯಕ್ತಿ ಸತ್ತರೆ ಅವನ ಅಂತ್ಯಕ್ರಿಯೆಗೆ ಜನವೇ ಸೇರದ,ಪಕ್ಕದ ಮನೆಯವರು ಅಥವಾ ಸಂಬಂಧಿಕರು ಕೂಡ ಪಾಲ್ಗೊಳ್ಳದ ,ಎಷ್ಟೋ ಸಂದರ್ಭದಲ್ಲಿ ಒಬ್ಬನೇ ಮಗ/ಮಗಳು ಇದ್ದರೂ ಅವರು ಕೂಡ ತನ್ನ ತಂದೆಯ ಅಂತ್ಯಕ್ರಿಯೆಯಿಂದ ದೂರ ಸರಿದ ಉದಾಹರಣೆಳು ಗೋಚರಿಸಿದ್ದು ನಮ್ಮ ಕಣ್ಮುಂದಿರುವ ಸತ್ಯದರ್ಶನ.
ಅಂತದ್ದೊಂದು ಅಮಾನವೀಯ ಘಟನೆ ಜರುಗಲು ಕಾರಣವಾದದ್ದು ಕೊರೋನಾ(ಡೆಲ್ಟಾ )ಎರಡನೇ ಅಲೆ ಎಂಬ ಮಹಾಮಾರಿ.ವಾಹನಗಳು ಚಲಿಸದ ಅಂಗಡಿ ಮುಗ್ಗಟ್ಟುಗಳು ಬಾಗಿಲು ಮುಚ್ಚಿರುವ ಮಾರುಕಟ್ಟೆಯ ಪ್ರದೇಶ ,ರಸ್ತೆಗಳು ,ಬಸ್/ರೈಲು ನಿಲ್ದಾಣಗಳು ಜನನಿಬಿಡ ಪ್ರದೇಶವನ್ನಾಗಿಸಿದ ಕುಖ್ಯಾತಿ ಮಹಾಮಾರಿ ಕೊರೋನಾಗೆ ಸಲ್ಲುತ್ತದೆ.

ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯು ಕೊರೋನಾಗೆ ತತ್ತರಿಸಿ ಹೋಗಿತ್ತು .ಜಿಲ್ಲೆಗೆ ಜಿಲ್ಲೆಯ ಸಂಪೂರ್ಣ ಭಯದ ವಾತಾವರಣದಲ್ಲಿ ಮುಳುಗಿತ್ತು.ಆಸ್ಪತ್ರೆಗಳಲ್ಲಿ ಬೆಡ್ ಗಳೇ ದೊರೆಯುತ್ತಿರಲ್ಲಿಲ್ಲ.ವಿಜಯಪುದಲ್ಲಿ ಆಸ್ಪತ್ರೆಗಳಿಗೆ ಹೋದರೆ ಸ್ಮಶಾನಕ್ಕೆ ಹೋಗುತ್ತಿದ್ದೇವೇನೋ ಅನ್ನುವ ಅನುಭವ.ಕುಡಿಯಲು ನೀರು ಸಹ ದೊರೆಯುತ್ತಿರಲಿಲ್ಲ.ಆದರೆ ಮುದ್ದೇಬಿಹಾಳ ,ತಾಳಿಕೋಟಿ ,ಬಸವನಬಾಗೇವಾಡಿ ತಾಲ್ಲೂಕಿನ ಜನ ಮುಖಮಾಡಿದ್ದು ಮಾತ್ರ ಮುದ್ದೇಬಿಹಾಳ ತಾಲ್ಲೂಕಿನ ಎಲ್ಲ ಸರಕಾರಿ ಆಸ್ಪತ್ರೆ ಕಡೆಗೆ, ಕಾರಣ ವೈದ್ಯಕೀಯ ವ್ಯವಸ್ಥೆ ಗುಣಮಟ್ಟದಾಗಿದ್ದು ಹಾಗೂ ಬಿಸಿ ಬಿಸಿಯಾದ ಆಹಾರ ,ಹಣ್ಣು ,ಬಿಸಿ ನೀರು ಹಾಲು ದೊರೆಯುವಂತೆ ಮಾಡಿದ್ದು ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ಎ ಎಸ್ ಪಾಟೀಲ ನಡಹಳ್ಳಿಯವರು.
ಅವರು ಉಳಿದ ಶಾಸಕರ ಹಾಗೆ ಮನೆಯಲ್ಲೇ ಕುಳಿತುಕೊಳ್ಳದೇ ಜನರ ಕಷ್ಟವೇ ನನ್ನ ಕಷ್ಟವೆಂದು ಜನರ ಹಿತಕ್ಕಾಗಿ ಟೊಂಕಕಟ್ಟಿ ನಿಂತರು.ಎಲ್ಲ ರೋಗಿಗಳಿಗೆ ಮೂರು ಹೊತ್ತು ಬಿಸಿಯಾದ ಅಡುಗೆಯನ್ನು ತಮ್ಮ ಮನೆಯಲ್ಲೇ ತಯಾರಿಸಿ ರೋಗಿಗಳಿಗೆ ಉಣಬಡಿಸಿದರು.ಜೊತೆಗೆ ಹಣ್ಣು, ಹಾಲು ,ಮೊಟ್ಟೆ ವಿತರಿಸಿದರು.ಅದು ಕೂಡ ತಮ್ಮ ಸ್ವಂತ ಖರ್ಚಿನಲ್ಲಿ .ಜೊತೆಗೆ ಮುದ್ದೇಬಿಹಾಳ ,ಬಸವನಬಾಗೇವಾಡಿ ತಾಲ್ಲೂಕಿನಾದ್ಯಂತ ಮಾಸ್ಕ,ಸಾನಿಟೈಸರ್ ಬಡವರಿಗೆ ರೇಶನ್ ನೀಡಿ ಸುಖದಲ್ಲಾಗುವವ ನಾಯಕನಲ್ಲ ಜನರ ಕಷ್ಟಗಳಿಗೆ ಸ್ಪಂದಿಸುವವ ನಿಜವಾದ ಜನನಾಯಕ ಅನ್ನೋ ನುಡಿ ಸಾಬೀತು ಮಾಡಿದರು.

ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ತುಂಬಾ ಕ್ಲಿಷ್ಟಕರವಾದ ಕೆಲಸ .ಅದರ ಅನುಷ್ಠಾನಕ್ಕಾಗಿ ಹಗಲಿರುಳು ಊಟ ನೀರು ಲೆಕ್ಕಿಸದೇ ಕ್ಷೇತ್ರದ ಜನರ ಒಳಿತಿಗಾಗಿ ತಮ್ಮ ಆರೋಗ್ಯದ ಕಡೆ ನಿಗಾ ವಹಿಸದೇ ಹೊಲಗಳಿಗೆ ನೀರು ಹರಿಸದೇ ವಿಶ್ರಮಿಸುವುದಿಲ್ಲ ಎಂಬ ದಿಟ್ಟ ನಿರ್ಧಾರದಿಂದ ಹಿಂದೆ ಸರಿಯದೇ ಹಿಡಿದ ಕಾಯಕ ಸಾಧಿಸಿರುವ ನಮ್ಮ ಶಾಸಕರ ಶ್ರಮವನ್ನು ಎಂದಿಗೂ ಅಲ್ಲಗಳೆಯಲಾಗಲ್ಲ.ಇಂತಹ ಶಾಸಕರು ನಮ್ಮ ಕ್ಷೇತ್ರಕ್ಕೆ ದೊರೆತಿರುವುದು ನಮ್ಮ ಪುಣ್ಯವೆಂದೆ ಭಾವಿಸುವುದರಲ್ಲ ಎರಡು ಮಾತಿಲ್ಲ.ಇವರು ಕೆಲಸ ಮಾಡಿರುವುದು ಪ್ರಚಾರಕ್ಕಾಗಿ ಅಲ್ಲ .ಜನರು ದು:ಖ ದುಮ್ಮಾನಗಳನ್ನು ತೊಲಗಿಸಲು.ಇವರು ಎಂದೂ ಮಾಧ್ಯಮದವರು ಮುಂದೆ ಬಂದು ಪೋಜು ನೀಡಿಲ್ಲ .ಯಾರನ್ನು ತೆಗಳುವುದರಲ್ಲಿ ಕಾಲಹರಣ ಮಾಡಿಲ್ಲ .ತಾವಾಯಿತು ತಮ್ಮ ಕೆಲಸವಾಯಿತು ಅನ್ನುವುದರಲ್ಲಿ ನಂಬಿಕೆ ಉಳ್ಳವರು .

ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅವರ ನೋವನ್ನು ಅಂತಕರಣದಿಂದ ಅರ್ಥೈಸಿಕೊಳ್ಳುವ ಅವರ ಆರ್ಥಿಕ ವೈಕಲ್ಯಕ್ಕೆ ಊರುಗೋಲಾಗುವ ಸ್ವಾರ್ಥವನ್ನು ಬದಿಗಿಟ್ಟು ನಿಸ್ವಾರ್ಥ ಸೇವೆ ಗೈಯ್ಯುವ ಹಸಿದವನಿಗೆ ಒಂದು ತುತ್ತು ಅನ್ನ ಇಕ್ಕುವ ಸೂರಿಲ್ಲದವರಿಗೆ ನೆರಳಾಗಲು ನೆರವಾಗುವ ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡುವ ಒಬ್ಬ ನೈಜವಾದ ಜನನಾಯಕನಿಗೆ ಇರಬೇಕಾದ ಗುಣಗಳು

ರಾಜಕಾರಣಿಗಳು ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಹೆಚ್ಚಾಗಿ ನಕರಾತ್ಮಕ ಪ್ರಚಾರ ಪಡೆಯುತ್ತಾರೆ, ಆದರೆ ಅವರು ನಮ್ಮ ಸಮಾಜಕ್ಕೆ ನೀಡುವ ಸಕಾರಾತ್ಮಕ ಕೊಡುಗೆಗಳನ್ನು ಒಪ್ಪಿಕೊಳ್ಳುವುದು ಮುಖ್ಯವಾಗಿದೆ. ಈ ಸಾರ್ವಜನಿಕ ಸೇವಕರು ತಮ್ಮ ಘಟಕಗಳ ಹಿತಾಸಕ್ತಿ ಮತ್ತು ಕಾಳಜಿಗಳನ್ನು ಪ್ರತಿನಿಧಿಸುವ ಕಷ್ಟಕರವಾದ ಕೆಲಸವನ್ನು ನಿರ್ವಹಿಸುತ್ತಾರೆ ಮತ್ತು ತಮ್ಮ ಸಮುದಾಯಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ.

ರಾಜಕಾರಣಿಗಳ ಪ್ರಮುಖ ಪಾತ್ರವೆಂದರೆ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಹೆಚ್ಚಿನ ಒಳಿತನ್ನು ಉತ್ತೇಜಿಸುವ ಕಾನೂನುಗಳನ್ನು ಮಾಡುವುದು. ಅವರು ತಮ್ಮ ಘಟಕಗಳ ಕಾಳಜಿಯನ್ನು ಆಲಿಸುತ್ತಾರೆ ಮತ್ತು ಈ ಸಮಸ್ಯೆಗಳನ್ನು ಪರಿಹರಿಸುವ ಶಾಸನವನ್ನು ರಚಿಸಲು ತಮ್ಮ ಅನುಭವ ಮತ್ತು ಪರಿಣತಿಯನ್ನು ಬಳಸುತ್ತಾರೆ. ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಸುಧಾರಿಸುವುದು, ಪರಿಸರವನ್ನು ರಕ್ಷಿಸುವುದು ಅಥವಾ ಎಲ್ಲಾ ನಾಗರಿಕರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು, ರಾಜಕಾರಣಿಗಳು ನಮ್ಮ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ.

ಮಾನ್ಯರು, ಸಹ ಮನುಷ್ಯರು, ಕುಟುಂಬಗಳು, ಸ್ನೇಹಿತರು ಮತ್ತು ಅವರ ರಾಜಕೀಯ ವೃತ್ತಿಜೀವನದ ಹೊರಗಿನ ಜೀವನ ಎಂದು ನಮೂದಿಸುವುದು ಯೋಗ್ಯವಾಗಿದೆ. ಅವರು ಆಗಾಗ್ಗೆ ಎದುರಿಸುತ್ತಿರುವ ಟೀಕೆಗಳು ಮತ್ತು ವೈಯಕ್ತಿಕ ದಾಳಿಗಳ ಹೊರತಾಗಿಯೂ, ಅವರು ತಮ್ಮ ಸಮುದಾಯಗಳಿಗೆ ಸೇವೆ ಸಲ್ಲಿಸುವುದನ್ನು ಮುಂದುವರೆಸುತ್ತಾರೆ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಕೆಲಸ ಮಾಡುತ್ತಾರೆ.

ಮಾನ್ಯರು, ಯಾವಾಗಲೂ ಅವರಿಗೆ ಅರ್ಹವಾದ ಮನ್ನಣೆಯನ್ನು ಪಡೆಯದಿದ್ದರೂ, ಅವರು ನಮ್ಮ ಸಮಾಜದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ತಮ್ಮ ಘಟಕಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಮತ್ತು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ರಾಜಕಾರಣಿಗಳು ನಮ್ಮ ಸಮುದಾಯಗಳಿಗೆ ಮತ್ತು ನಮ್ಮ ಜಗತ್ತಿಗೆ ನೀಡುವ ಸಕಾರಾತ್ಮಕ ಕೊಡುಗೆಗಳನ್ನು ನಾವು ಅಂಗೀಕರಿಸಬೇಕು ಮತ್ತು ಪ್ರಶಂಸಿಸಬೇಕು.

ಸ್ನೇಹಿತರೆ ನಮಗೆ ಬೇಕಾಗಿರುವುದು ಇಂತಹ ನಾಯಕರಲ್ಲವೇ ಜನರನಾಡಿಮಿಡಿತ ಅರಿತ ನಡಹಳ್ಳಿಯವರು ‘ಕರುಣಮಯಿ’ ಅಲ್ಲದೇ ಮತ್ತೇನೋ ?

Leave a Reply

Your email address will not be published. Required fields are marked *